Thursday, 17 October 2024

ನನ್ನ ತಂದೆಯ ಮೇಲೆ ಒಂದು ಕವನ

 ಹೆತ್ತದ್ದು ಅಮ್ಮನಾದರೂ ಒಳಗೊಳಗೇ ಅತ್ತದ್ದು ಅಪ್ಪ..

 ಹುಟ್ಟಿದಾಗ ಕೂಗಿದ್ದು ಅಮ್ಮನನ್ನಾದರೂ ಬಿಗಿದಿಟ್ಟ ಉಸಿರು ಬಿಟ್ಟಿದ್ದು ಅಪ್ಪ..

 ಹೊಟ್ಟೆ ತುಂಬಿಸಿದ್ದು ಅಮ್ಮನಾದರೂ ಹೊಟ್ಟೆ ಕಟ್ಟಿ ದುಡಿದು ಹಾಕಿದ್ದು ಅಪ್ಪ.. 

ಕೇಳಿ ಕೇಳಿದ್ದು ಕೊಟ್ಟಿದ್ದು ಅಮ್ಮನಾದರೂ ಅದರಿಂದಿರುವ ಕಾಣದ ಕೈಗಳು ಅಪ್ಪ..

 ವಿದ್ಯೆ ತಲೆಗೆ ಹತ್ತಿಸಿದ್ದು ಅಮ್ಮನಾದರೂ ಪ್ರತಿದಿನವೂ ದಾರಿದೀಪವಾಗಿದ್ದದ್ದು ಅಪ್ಪ..

 ಹರಸಿ ಆರೈಸಿ ಮುತ್ತಿಡುತ್ತಿದ್ದ ಅಮ್ಮ ಪ್ರೀತಿ ವ್ಯಕ್ತಪಡಿಸದೆ ಮೂಕನಾಗಿದ್ದು ಅಪ್ಪ..

 ಎಲ್ಲಕ್ಕಿಂತ ಮಿಗಿಲು ಅಮ್ಮನಾದರೂ ಮಿಗಿಲೆನ್ನುವ ಪದವೇ ಸಾಲುತ್ತಿಲ್ಲ ನಿನಗ ಅಪ್ಪ..

 ನಾ ಕಂಡ ದೇವರು ಅಮ್ಮನಾದರೂ ಆ ದೇವರಿಗೇ ದೇವರಾಗಿದ್ದವನು ನೀನಪ್ಪ.. 👳🙏

No comments:

Post a Comment

The Devil Movie Images

  THE DEVIL 🐘